Telegram Join My Telegram   WhatsApp Join My WhatsApp

ಡಾ.ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ 2026-27: 10ನೇ ಹಾಗೂ 12ನೇ ಪಾಸ್ ವಿದ್ಯಾರ್ಥಿಗಳಿಗೆ ₹30,000 ವರೆಗೆ ನೆರವು, ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಬಾಕಿ

ಭಾರತದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಗಳ ಕಾರಣದಿಂದ ತಮ್ಮ ಉನ್ನತ ಶಿಕ್ಷಣದ ಕನಸುಗಳನ್ನು ಅರ್ಧದಲ್ಲೇ ನಿಲ್ಲಿಸಬೇಕಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಿ ಅವರ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುವ ಉದ್ದೇಶದಿಂದ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ವಿದ್ಯಾರ್ಥಿವೇತನ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದೇ ಸಾಲಿನಲ್ಲಿ ಇದೀಗ Buddy4Study ಸಂಸ್ಥೆಯು “ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ ಯೋಜನೆ 2026-27” ಅನ್ನು ಘೋಷಿಸಿದ್ದು, ದೇಶದಾದ್ಯಂತದ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ನೀಡಲು ಮುಂದಾಗಿದೆ.

ಭಾರತದ ಮೊದಲ ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು ಶಿಕ್ಷಣದ ಮಹತ್ವವನ್ನು ಸದಾ ಒತ್ತಿಹೇಳಿದ್ದರು. ಅವರ ಆದರ್ಶ ಮತ್ತು ದೃಷ್ಟಿಕೋನದಿಂದ ಪ್ರೇರಿತವಾಗಿ ಆರಂಭಗೊಂಡಿರುವ ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ವೆಚ್ಚವನ್ನು ನಿರ್ವಹಿಸಲು ಗರಿಷ್ಠ ₹30,000 ರೂ ವರೆಗೆ ಒಂದು ಬಾರಿ ವಿದ್ಯಾರ್ಥಿವೇತನ ಪಡೆಯಲಿದ್ದಾರೆ.

ವಿದ್ಯಾರ್ಥಿವೇತನ ಯೋಜನೆಯ ಪ್ರಮುಖ ಉದ್ದೇಶ

ಈ ಯೋಜನೆಯ ಮೂಲ ಉದ್ದೇಶ ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದಾಗಿರುತ್ತದೆ. ಆರ್ಥಿಕ ಅಡಚಣೆಗಳಿಂದ ಯಾವುದೇ ಪ್ರತಿಭಾವಂತ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಯೋಜನೆಯನ್ನು ರೂಪಿಸಲಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಅಥವಾ ಕಾಲೇಜು ಶಿಕ್ಷಣವನ್ನು ಯಾವುದೇ ಅಡೆತಡೆಗಳಿಲ್ಲದೇ.. ಮುಂದುವರಿಸಲು ಈ ನೆರವು ಸಹಕಾರಿಯಾಗಲಿದೆ.

ಇದರ ಜೊತೆಗೆ ಶೈಕ್ಷಣಿಕ ಸಾಧನೆಯನ್ನು ಉತ್ತೇಜಿಸುವುದು, ಮತ್ತು ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಪ್ರಮುಖ ಗುರಿಗಳಾಗಿವೆ.

 

ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ?

ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಶುಲ್ಕದ ರಚನೆಗೆ ಅನುಗುಣವಾಗಿ ಗರಿಷ್ಠ ₹30,000 ವರೆಗೆ ಒಂದು ಬಾರಿ ವಿದ್ಯಾರ್ಥಿವೇತನ ಪಡೆಯಲಿದ್ದಾರೆ. ಈ ಮೊತ್ತವನ್ನು ಶಿಕ್ಷಣಕ್ಕೆ ಸಂಬಂಧಿಸಿದ ಅಗತ್ಯ ವೆಚ್ಚಗಳಿಗೆ ಮಾತ್ರ ಬಳಸಬೇಕು.

ವಿದ್ಯಾರ್ಥಿವೇತನದ ಮೊತ್ತವನ್ನು ಕೆಳಗಿನ ಉದ್ದೇಶಗಳಿಗೆ ಬಳಸಬಹುದು:

  • ಟ್ಯೂಷನ್ ಶುಲ್ಕ ಪಾವತಿ
  • ಪುಸ್ತಕಗಳ ಖರೀದಿ
  • ಅಧ್ಯಯನ ಸಾಮಗ್ರಿಗಳು
  • ವಸತಿ ವೆಚ್ಚ
  • ಶಿಕ್ಷಣ ಸಂಬಂಧಿತ ಇತರ ಅಗತ್ಯ ಖರ್ಚುಗಳು

10ನೇ ತರಗತಿ ಉತ್ತೀರ್ಣ ವಿದ್ಯಾರ್ಥಿಗಳಿಗೆ ಅರ್ಹತೆ

2026ರಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅರ್ಹತಾ ಮಾನದಂಡಗಳು:

  • 2026ರಲ್ಲಿ 10ನೇ ತರಗತಿ ಉತ್ತೀರ್ಣರಾಗಿರಬೇಕು
  • ಕನಿಷ್ಠ 65% ಅಂಕಗಳನ್ನು ಪಡೆದಿರಬೇಕು
  • ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷ ಮೀರಿರಬಾರದು

ಆದ್ಯತೆ ಯಾರಿಗೆ?

ಯೋಜನೆಯಡಿ ಕೆಲವು ವರ್ಗದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

  • ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು
  • ಅಂಗವಿಕಲ ವಿದ್ಯಾರ್ಥಿಗಳು (PwD)
  • ಈಶಾನ್ಯ ಭಾರತದ ರಾಜ್ಯಗಳ ವಿದ್ಯಾರ್ಥಿಗಳು
  • ಆಸ್ಪಿರೇಷನಲ್ ಜಿಲ್ಲೆಗಳ ವಿದ್ಯಾರ್ಥಿಗಳು

ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ಮೊದಲು ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

  • ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ
  • 10ನೇ ತರಗತಿ ಅಂಕಪಟ್ಟಿ
  • ಪ್ರವೇಶ ಪತ್ರ ಅಥವಾ ಗುರುತಿನ ಚೀಟಿ
  • ಶುಲ್ಕ ರಸೀದಿ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಉಳಿತಾಯ ಖಾತೆಯ  ವಿವರಗಳು(ಮೊದಲ ಪೇಜ್ )

12ನೇ ತರಗತಿ ಉತ್ತೀರ್ಣ ವಿದ್ಯಾರ್ಥಿಗಳಿಗೆ ಅರ್ಹತೆ

2025 ಅಥವಾ 2026ರಲ್ಲಿ 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಹತಾ ಷರತ್ತುಗಳು:

  • 2025 ಅಥವಾ 2026ರಲ್ಲಿ 12ನೇ ತರಗತಿ ಪಾಸ್ ಆಗಿರಬೇಕು.
  • ಕನಿಷ್ಠ 65% ಅಂಕ ಪಡೆದಿರಬೇಕು
  • ವಾರ್ಷಿಕ ಕುಟುಂಬ ಆದಾಯ ₹8 ಲಕ್ಷ ಮೀರಿರಬಾರದು

12ನೇ ಪಾಸ್ ವಿದ್ಯಾರ್ಥಿಗಳಿಗೆ ಅಗತ್ಯ ದಾಖಲೆಗಳು

  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಗುರುತಿನ ಚೀಟಿ
  • 10ನೇ ಹಾಗೂ 12ನೇ ತರಗತಿ ಅಂಕಪಟ್ಟಿಗಳು
  • ಪ್ರವೇಶ ಪುರಾವೆ
  • ಶುಲ್ಕ ರಸೀದಿ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರಗಳು(ಮೊದಲ ಪೇಜ್ )

ಅರ್ಜಿ ಸಲ್ಲಿಸುವ ವಿಧಾನ : 

1. Buddy4Study   ಪೋರ್ಟಲ್‌ಗೆ ಭೇಟಿ ನೀಡಿ.

2. ನಿಮ್ಮ ಖಾತೆಗೆ ಲಾಗಿನ್ ಮಾಡಿ.

3.ಹೊಸ ಬಳಕೆದಾರರಾಗಿದ್ದರೆ ನೋಂದಣಿ ಮಾಡಿ.

4.“Dr. Rajendra Prasad Scholarship Program 2026-27” ಆಯ್ಕೆ ಮಾಡಿರಿ .

5.“Start Application” ಮೇಲೆ ಕ್ಲಿಕ್ ಮಾಡಿ.

6. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.

7. ದಾಖಲೆಗಳನ್ನು ಅಪ್‌ಲೋಡ್ ಮಾಡಿ.

8. ಮಾಹಿತಿಯನ್ನು ಪರಿಶೀಲಿಸಿ.

9.  ಅಂತಿಮವಾಗಿ “Submit” ಬಟನ್ ಒತ್ತಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ 28 ಜೂನ್ 2026 ಆಗಿದೆ. ಕೊನೆಯ ದಿನದವರೆಗೆ ಕಾಯದೆ ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸುವುದು ಒಳಿತು.

ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

ಪ್ರಸ್ತುತ ಶಿಕ್ಷಣ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ₹30,000 ವರೆಗೆ ದೊರೆಯುವ ಈ ವಿದ್ಯಾರ್ಥಿವೇತನ ಅನೇಕ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ಬಲ ತುಂಬಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಉಪಯುಕ್ತ ಯೋಜನೆಯಾಗಿದೆ.

ಆದ್ದರಿಂದ ನೀವು ಅಥವಾ ನಿಮ್ಮ ಪರಿಚಯದವರು 10ನೇ ಅಥವಾ 12ನೇ ತರಗತಿಯನ್ನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಆರ್ಥಿಕ ನೆರವಿನ ಅಗತ್ಯವಿದ್ದರೆ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಅರ್ಜಿ ಸಲ್ಲಿಸಿ, ನಿಮ್ಮ ಶಿಕ್ಷಣದ ಭವಿಷ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಿ.

ಅರ್ಜಿ ಸಲ್ಲಿಸಲು ಕೆಳಗೆ ಇರುವ ಲಿಂಕ್ ಬಳಸಿ :

https://www.buddy4study.com/page/dr-rajendra-prasad-scholarship-program

 

Leave a Comment